ಜಗಕೆಲ್ಲ ಸುರಿಯಲಿ ನವಯುಗದ ಜಡಿಮಳೆ
ಕೊಚ್ಚಿಕೊಂಡೊಯ್ಯಲಿ ಜಾತೀಯತೆಯ ಕೊಳೆ
ಉರಿವ ಸೂರ್ಯನುರಿಸಿಬಿಡಲಿ ಮತಭೇದದ ಸಾರ
ಅಸಮಾನ ಸಮಾಜವೇ ತೊಲಗು ದೂರ ದೂರ
ತಾಯಿಯಿಲ್ಲ ತಂದೆಯಿಲ್ಲ ಯಾರೋ ಕೊಟ್ಟ ಜನ್ಮ
ಹೇಗೆ ಹುಟ್ಟಿ ಬೆಳೆಯಿತೊ?ಜಾತಿ ಮುಳ್ಳು ತಮ್ಮ
ಕುಡಿವನೀರೂ ಅವನದಂತೆ ಬೆಳೆದ ಬೆಳೆಯು ಕೂಡ
ಒಂದೇ ನೆತ್ತರಲ್ಲೂ ಭೇದ ಮಾಡಿಬಿಟ್ಟ ಮೂಢ
ಎಲ್ಲರಿಗೂ ಒಂದೆ ಗಾಳಿ ಒಂದೆ ನೆಲದ ಅನ್ನ
ಮರೆತು ಅದನು ಜಾತಿ ಭೂತ ಕೊರೆದ ಮನಕೆ ಕನ್ನ
ಒಡೆಯಿತು ಹೋಳಾಯಿತು ಮಾನವತೆಯ ಧರ್ಮ
ಬುಧ್ಧ ಬಸವರಿದ್ದರೂ ಅಳಿಯದದರ ಮರ್ಮ
ದುಡಿಯದವಗೆ ಎಲ್ಲಾ ಇಲ್ಲಿ ದುಡಿವಗೇನೂ ಇಲ್ಲ
ಮೇಲಿನವ ದಬ್ಬಾಳಿಕೆಯಲಿ ಕಸಿದುಕೊಂಡನೆಲ್ಲ
ಬೀಳುತಿದೆ ಬಡವನ ಕತ್ತಿಗೆ ಹಸಿವಿನ ಕುಣಿಕೆ
ಸಿರಿವಂತ ಮಾಡುತಿರಲು ಮುಚ್ಚಿಟ್ಟ ಹಣದ ಏಣಿಕೆ
ಮುಂದೊದು ದಿನ ಹುಟ್ಟಿ ಬರಲಿ
ಸಮಾನತೆಯ ಸೂರ್ಯ
ಸಮಬಾಳು ಕೊಡಲಿ ಸರ್ವರಿಗೂ
ಅಳಿಸಿ ಜಾತಿ ಕ್ರೌರ್ಯ
---------------------------------------
"ಭಾವಕಣ"
ಕೊಚ್ಚಿಕೊಂಡೊಯ್ಯಲಿ ಜಾತೀಯತೆಯ ಕೊಳೆ
ಉರಿವ ಸೂರ್ಯನುರಿಸಿಬಿಡಲಿ ಮತಭೇದದ ಸಾರ
ಅಸಮಾನ ಸಮಾಜವೇ ತೊಲಗು ದೂರ ದೂರ
ತಾಯಿಯಿಲ್ಲ ತಂದೆಯಿಲ್ಲ ಯಾರೋ ಕೊಟ್ಟ ಜನ್ಮ
ಹೇಗೆ ಹುಟ್ಟಿ ಬೆಳೆಯಿತೊ?ಜಾತಿ ಮುಳ್ಳು ತಮ್ಮ
ಕುಡಿವನೀರೂ ಅವನದಂತೆ ಬೆಳೆದ ಬೆಳೆಯು ಕೂಡ
ಒಂದೇ ನೆತ್ತರಲ್ಲೂ ಭೇದ ಮಾಡಿಬಿಟ್ಟ ಮೂಢ
ಎಲ್ಲರಿಗೂ ಒಂದೆ ಗಾಳಿ ಒಂದೆ ನೆಲದ ಅನ್ನ
ಮರೆತು ಅದನು ಜಾತಿ ಭೂತ ಕೊರೆದ ಮನಕೆ ಕನ್ನ
ಒಡೆಯಿತು ಹೋಳಾಯಿತು ಮಾನವತೆಯ ಧರ್ಮ
ಬುಧ್ಧ ಬಸವರಿದ್ದರೂ ಅಳಿಯದದರ ಮರ್ಮ
ದುಡಿಯದವಗೆ ಎಲ್ಲಾ ಇಲ್ಲಿ ದುಡಿವಗೇನೂ ಇಲ್ಲ
ಮೇಲಿನವ ದಬ್ಬಾಳಿಕೆಯಲಿ ಕಸಿದುಕೊಂಡನೆಲ್ಲ
ಬೀಳುತಿದೆ ಬಡವನ ಕತ್ತಿಗೆ ಹಸಿವಿನ ಕುಣಿಕೆ
ಸಿರಿವಂತ ಮಾಡುತಿರಲು ಮುಚ್ಚಿಟ್ಟ ಹಣದ ಏಣಿಕೆ
ಮುಂದೊದು ದಿನ ಹುಟ್ಟಿ ಬರಲಿ
ಸಮಾನತೆಯ ಸೂರ್ಯ
ಸಮಬಾಳು ಕೊಡಲಿ ಸರ್ವರಿಗೂ
ಅಳಿಸಿ ಜಾತಿ ಕ್ರೌರ್ಯ
---------------------------------------
"ಭಾವಕಣ"
No comments:
Post a Comment