ಸ್ವಾತಂತ್ರ್ಯದ ಹಣತೆಯ ಬೆಳಕು
ಕುಣಿಕೆಯಲ್ಲಿ ನೆತಾಡುತ್ತಿದೆ ಕತ್ತಲೆಯಲಿ
ಬಿಕ್ಕುತ್ತಿದೆ ನಿಜ ಅಸ್ತಿತ್ವಕ್ಕಾಗಿ
ನಡು ರಾತ್ರಿಯಲಿ ಜನಿಸಿ ಬೆಳಕಿಗಾಗಿ
ಸ್ವಾತಂತ್ರ್ಯದ ಹಕ್ಕಿ ರೆಕ್ಕೆಬಡಿಯುತ್ತದೆ
ಪರಿತಪಿಸುತ್ತದೆ ಹಾರಲಾಗದೆ
ಅಧಿಕಾರದ ಜಡಶಿಲೆಯು ಹಿಡಿದಿದೆ ಕಾಲುಗಳ
ರೆಕ್ಕೆ ಬಡಿಯಲಷ್ಠೆ ಅವಕಾಶ
ನ್ಯಾಯದ ಸೂರ್ಯನೂ ಮರೆಯಾಗಿದ್ದಾನೆ
ಅನ್ಯಾಯದ ಕತ್ತಲ ಕಾಲು ಚಲಿಸುತ್ತದೆ
ಕಗ್ಗತ್ತಲ ರಾತ್ರಿಯಲಿ
ಎದುರು ನಿಂತವರ ಎದೆ ಸೀಳಲು
ಸಿಡಿದೆದ್ದವರ ಸೊಲ್ಲಡಗಿಸಲು
ಚಂದಿರನೂ ಬಲಿಯಾಗಿದ್ದಾನೆ ಇರುಳಿಗೆ
ನೆತ್ತರ ಜಲಪಾತ ನರಳಿ ಸುರಿಯುತ್ತದೆ
ಶತಮಾನದ ಕೊಳಕನ್ನು
ಕಡಲಾಳದಲ್ಲಿ ಅಡಗಿಸಲು
ಪ್ರಜಾಪ್ರಭುತ್ವದ ಕೊರಳ ಕಡಿದಿದ್ದಾರೆ
ಅಂದಿನಿಂದಲೂ ಆಳಿದವರು
ಪಿರಂಗಿಯ ಎದುರಿಸಿದ ಕ್ರಾಂತಿಯ ರಕ್ತ
ಇಂದಿಗೂ ಕೊರಗುತ್ತಿದೆ ಅನಾಥವಾಗಿ
ಸ್ವಾತಂತ್ರ್ಯ ವೀರರು ಸೀಮಿತವಾಗಿದ್ದಾರೆ
ಜನ್ಮಾಚರಣೆ ಪುಣ್ಯಸ್ಮರಣೆಗಳಿಗೆ
ರೋಗಗ್ರಸ್ತ ಆಢಳಿತದೊಳಗೆ
ಇತಿಹಾಸವು ಮರೆಯಾಗಿ ಅಳುತ್ತಿದೆ
ಸುಳ್ಳು ಬೋಧನೆಗೆ ನೊಂದು
ಬಚ್ಚಿಟ್ಟಿದ್ದಾರೆ ಅದರ ಪುಟಗಳ
ಹೊಳೆವ ಚಿನ್ನದ ಪಂಜರದಲ್ಲಿ
ಸಮಾಜದ ಕನ್ನಡಿ ಒಡೆದಿದೆ
ಜಾತಿಯ ನೂರು ಬಿಂಬಗಳ ನಡುವೆ
ವಿರಾಮವಿಲ್ಲದೆ ನಡೆಯುತ್ತವೆ ಧರ್ಮಯುಧ್ಧಗಳು
ಭಾರತಾಂಭೆಯ ನಡು ಎದೆಯ ಮೇಲೆ
ಭಯೋತ್ಪಾಧನೆಯ ವಿಷ ಬೀಜಗಳ ಬಿತ್ತಿ
ಸ್ವಾತಂತ್ರ್ಯದ ಹಕ್ಕಿ ಶಿಲೆಯಾಗುತ್ತದೆ
ಎಂದಿಗೂ ಸಾಯದೆ
ಬದುಕಲಾಗದೆ,ಹಾರಲಾಗದೆ
ರೆಕ್ಕೆ ಬಡಿಯಲಷ್ಠೇ ಅವಕಾಷ....
------------------------------------------
"ಭಾವಕಣ"
ಕುಣಿಕೆಯಲ್ಲಿ ನೆತಾಡುತ್ತಿದೆ ಕತ್ತಲೆಯಲಿ
ಬಿಕ್ಕುತ್ತಿದೆ ನಿಜ ಅಸ್ತಿತ್ವಕ್ಕಾಗಿ
ನಡು ರಾತ್ರಿಯಲಿ ಜನಿಸಿ ಬೆಳಕಿಗಾಗಿ
ಸ್ವಾತಂತ್ರ್ಯದ ಹಕ್ಕಿ ರೆಕ್ಕೆಬಡಿಯುತ್ತದೆ
ಪರಿತಪಿಸುತ್ತದೆ ಹಾರಲಾಗದೆ
ಅಧಿಕಾರದ ಜಡಶಿಲೆಯು ಹಿಡಿದಿದೆ ಕಾಲುಗಳ
ರೆಕ್ಕೆ ಬಡಿಯಲಷ್ಠೆ ಅವಕಾಶ
ನ್ಯಾಯದ ಸೂರ್ಯನೂ ಮರೆಯಾಗಿದ್ದಾನೆ
ಅನ್ಯಾಯದ ಕತ್ತಲ ಕಾಲು ಚಲಿಸುತ್ತದೆ
ಕಗ್ಗತ್ತಲ ರಾತ್ರಿಯಲಿ
ಎದುರು ನಿಂತವರ ಎದೆ ಸೀಳಲು
ಸಿಡಿದೆದ್ದವರ ಸೊಲ್ಲಡಗಿಸಲು
ಚಂದಿರನೂ ಬಲಿಯಾಗಿದ್ದಾನೆ ಇರುಳಿಗೆ
ನೆತ್ತರ ಜಲಪಾತ ನರಳಿ ಸುರಿಯುತ್ತದೆ
ಶತಮಾನದ ಕೊಳಕನ್ನು
ಕಡಲಾಳದಲ್ಲಿ ಅಡಗಿಸಲು
ಪ್ರಜಾಪ್ರಭುತ್ವದ ಕೊರಳ ಕಡಿದಿದ್ದಾರೆ
ಅಂದಿನಿಂದಲೂ ಆಳಿದವರು
ಪಿರಂಗಿಯ ಎದುರಿಸಿದ ಕ್ರಾಂತಿಯ ರಕ್ತ
ಇಂದಿಗೂ ಕೊರಗುತ್ತಿದೆ ಅನಾಥವಾಗಿ
ಸ್ವಾತಂತ್ರ್ಯ ವೀರರು ಸೀಮಿತವಾಗಿದ್ದಾರೆ
ಜನ್ಮಾಚರಣೆ ಪುಣ್ಯಸ್ಮರಣೆಗಳಿಗೆ
ರೋಗಗ್ರಸ್ತ ಆಢಳಿತದೊಳಗೆ
ಇತಿಹಾಸವು ಮರೆಯಾಗಿ ಅಳುತ್ತಿದೆ
ಸುಳ್ಳು ಬೋಧನೆಗೆ ನೊಂದು
ಬಚ್ಚಿಟ್ಟಿದ್ದಾರೆ ಅದರ ಪುಟಗಳ
ಹೊಳೆವ ಚಿನ್ನದ ಪಂಜರದಲ್ಲಿ
ಸಮಾಜದ ಕನ್ನಡಿ ಒಡೆದಿದೆ
ಜಾತಿಯ ನೂರು ಬಿಂಬಗಳ ನಡುವೆ
ವಿರಾಮವಿಲ್ಲದೆ ನಡೆಯುತ್ತವೆ ಧರ್ಮಯುಧ್ಧಗಳು
ಭಾರತಾಂಭೆಯ ನಡು ಎದೆಯ ಮೇಲೆ
ಭಯೋತ್ಪಾಧನೆಯ ವಿಷ ಬೀಜಗಳ ಬಿತ್ತಿ
ಸ್ವಾತಂತ್ರ್ಯದ ಹಕ್ಕಿ ಶಿಲೆಯಾಗುತ್ತದೆ
ಎಂದಿಗೂ ಸಾಯದೆ
ಬದುಕಲಾಗದೆ,ಹಾರಲಾಗದೆ
ರೆಕ್ಕೆ ಬಡಿಯಲಷ್ಠೇ ಅವಕಾಷ....
------------------------------------------
"ಭಾವಕಣ"
No comments:
Post a Comment