ನಮ್ಮನ್ಹುಟ್ಸಿದ್ದ್ಯಾವ್ರೇ ನೀನು
ಎಲ್ಲಿಗ್ಹಾಳಾಗ್ಹೋದೆ
ನಮ್ಗೋಳು ಕೇಳಾದ್ಬುಟ್ಟು ಬೇರೆ
ಕೆಲ್ಸ ನಿಂಗೇನದೆ
ಇರೋರ್ಗೇನೆ ಎಲ್ಲಾ ಬಿಟ್ಟು
ಇಲ್ದೋರ್ಗೆಲ್ಲಾ ಕೈಯ ಕೊಟ್ಟು
ಗುಡಿವಳ್ಗೆ ಆರಾಮಾಗಿ
ಯಾಕೆ ಕುಂತ್ಕಂಬುಟ್ಟೆ
ನಿಂಗೆ ನೂರಾರ್ ಹೆಸ್ರಿಟ್ಟವ್ರೆ
ದೊಡ್ದೊಡ್ಗುಡಿ ಕಟ್ಟಿ
ಹಾಲು ತುಪ್ದಲ್ತೊಳೀತವ್ರೆ
ನಿನ್ನ ಮೈ ಕೈ ಮುಟ್ಟಿ
ಜಾತಿಗೊಂದು ದೇವ್ರ್ಮಾಡ್ಕಂಡು
ದಿನಾ ಕಚ್ಚಾಡ್ತಾರೆ
ನಿನ್ನ ಹೆಸ್ರ್ಹೇಳ್ದುಡ್ಮಾಡ್ಕಂಡು
ಲೂಟಿ ಹೊಡೀತವ್ರೆ
ಉಂಡವ್ರೆಲೆಲ್ಹೊರ್ಳಾಡಿದ್ರೆ
ಪಾಪ ಕಳ್ದಂಗಂತೆ
ಭೂಮಿ ಬಗ್ದು ಕಿರಿಟ ಇಟ್ರೆ
ನೀನೊಲಿತಿಯಂತೆ
ಅವ್ಹೇಳ್ತಿದ್ಲು ಈ ನೆಲ್ದಲ್ಲಿ
ನೀನೊಡಾಡ್ತಿದ್ದಂತೆ
ಕಷ್ಠ ಹೇಳಕ್ಬಂದ್ರೆ ಯಾಕೆ
ಹಂಗೆ ಕದ್ಹೋಡ್ದಂತೆ?
ಕೇಳಿದ್ದೆಲ್ಲಾ ಕೊಡೂ ನಿಂಗೇ
ಕೊಡ್ತಾರ್ಚಿನ್ನದ್ಗಟ್ಟಿ
ಬಡವನ್ಮನೇಲನ್ನ ಇಲ್ಲ
ಹೊಟ್ಟೇಗ್ತಣ್ಣೀರ್ಬಟ್ಟಿ
ಧರ್ಮ ಗಿರ್ಮ ಅಂತ ಮಾಡ್ಕಂಡ್
ಕರ್ಮ ಮರ್ತವ್ರೆಲ್ಲಾ
ಇನ್ಹತ್ಸಾರಿ ಹುಟ್ಟೀದ್ರೂನು
ನಿನ್ಮರ್ಮ ತಿಳ್ಯಾಕಿಲ್ಲ
ನೀನೆ ಹೇಳು ನೀನ್ಮಾಡಿದ್ದು
ನಿಂಗೆ ಸರಿ ಐತ
ಬುದ್ಧಿ ಕೊಟ್ಟು ಸ್ವಾರ್ತದ್ಜೊತೆಗ್
ಆಸೆ ಕೊಡ್ಬೇಕಿತ್ತ
ಪಾಪ ತುಂಬ್ದಾಗ್ಬರ್ತೀಯಂತೆ
ಆಕಾಸ್ದಿಂದ ನೀನು
ಸಾಯಕ್ಮುಂಚೆ ನೋಡ್ಬೇಕ್ನಿನ್ನ
ಕಾಯ್ತಾಯಿರ್ತೀನ್ನಾನು
ದ್ಯಾವ್ರೆ ನೀನು ಇರೋದಾದ್ರೆ
ನಂದೊಂದ್ಮಾತು ಕೇಳು
ಮನುಸ್ರೆಲ್ಲಾ ಒಂದೆ ಅಂತ
ನೀನೆ ಬಂದು ಹೇಳು
ನೀನೆ ಮಾಡಿದ್ತಪ್ಪು ಇದು
ನೀನೆ ಸರಿ ಮಾಡು
ಇಲ್ಲ ಅಂದ್ರೆ ಹುಡಿಕ್ಯಂಬಂದು
ನ್ಯಾಯ ಕೇಳ್ತೀನ್ನೋಡು
"ಭಾವಕಣ"
ಇಲ್ಲ ಅಂದ್ರೆ ಹುಡಿಕ್ಯಂಬಂದು
ನ್ಯಾಯ ಕೇಳ್ತೀನ್ನೋಡು
"ಭಾವಕಣ"
No comments:
Post a Comment