ನೀನಿಲ್ಲದ ಊರಿನಲಿ
ಕಡುಕತ್ತಲ ರಾತ್ರಿಯಲಿ
ನಿನ ಪ್ರೀತಿಯ ಹುಡುಕಿ ಹೊರಟೆ
ಮಿಣುಕು ಹುಳದ ಬೆಳಕಿನಲಿ
ನೀ ಬೇಡವೆಂದು ಎಸೆದ ಹೃದಯ
ನೀನಿಲ್ಲದೆ ಅದು ಬರೀ ಶೂನ್ಯ
ಇರುಳ ಮೂಲೆಯಲೆಲ್ಲೋ ನಿನಗಾಗಿ ನರಳುತಿದೆ
ಹೂಳಿಡುವ ನರಿಹಿಂಡು ಅದರ ಜಾಡು ಹಿಡಿಯುತಿದೆ
ಕೇಳಲಾರೆ ನನ್ನೆದೆಯ ನೋವಿನಾಕ್ರಂದನ
ಬೇತಾಳ ಮಾಡಿದೆ ಬಿಸಿನೆತ್ತರಿಗೆ ಆಕ್ರಮಣ
ಎದೆಬಿಡುತಿದೆ ಕೊನೆಯುಸಿರು ಶೈಯ್ಯೆಯ ಮೇಲೆ
ನೆನಪುಗಳು ಕಾತರಿಸಿವೆ ಇಡಲು ಬೆಂಕಿ ಜ್ವಾಲೆ
ಅಗೋ ಬೀಳುತಿದೆ ಎದೆ ಕೊರಳಿಗೆ ಯಮಪಾಶ
ಕೊಡದಿದ್ದರೆ ನಿನ್ನೆದೆಯಲಿ ಎನ ಪ್ರೀತಿಗೆ ಅವಕಾಶ
ನಿನ ಪ್ರೀತಿಯೇ ಸಂಜೀವಿನಿ ಕೊಡು ಎದೆಗೆ ಜೀವ
ನಿನ್ನಿಂದಲೇ ಉದಯಿಸಲಿ ಪ್ರೀತಿ ಬೆಳಕ ಕಾವ್ಯ
----------------------------------------
"ಭಾವಕಣ"
No comments:
Post a Comment