ನಾನಾಗಬೇಕಿದೆ ಜಗಬೆಳಗೊ ಸೂರ್ಯ
ಇರುವೆಲ್ಲಾ ಇರುಳನ್ನು ಇಡಿಯಾಗಿ ತೊಳೆದು
ಬರುವೆಲ್ಲಾ ಕಷ್ಠಗಳ ಬಿಡದಂತೆ ಬಳಿದು
ಮನುಕುಲದ ಮನದಲ್ಲಿ ಬೆಳಕಂತೆ ಹೊಳೆದು
ಸಿದ್ಧನಾಗಬೇಕಿದೆ ಸನ್ನದ್ಧನಾಗಬೇಕಿದೆ
ಅಪ್ರಭುದ್ಧತೆಯಿಂದ ಪ್ರಭುಧ್ಧನಾಗಬೇಕಿದೆ
ವೃದ್ಧಿಯಾಗಬೇಕಿದೆ ಸಮೃಧ್ಧಿಯಾಗಬೇಕಿದೆ
ಹಸಿದವರ ಹೊಟ್ಟೆಗೆ ಅನ್ನವೀಯಬೇಕಿದೆ
ಅರಿವಾಗಬೇಕಿದೆ ಹರಿವಾಗಬೇಕಿದೆ
ನೊಂದವರಿಗೆ ನೆರಳಾಗಬೇಕಿದೆ
ಗುರುವಾಗಬೇಕಿದೆ ಗುರಿಯಾಗಬೇಕಿದೆ
ನನ್ನವರ ಸಾಧನೆಗೆ ಹಾದಿಯಾಗಬೇಕಿದೆ
ಮಳೆಯಾಗಬೇಕಿದೆ ಬೆಳೆಯಾಗಬೇಕೀದೆ
ಭೂತಾಯಿ ಎಲ್ಲರಿಗೂ ಹಾಲೂಡಬೇಕಿದೆ
ಹೆಗಲಾಗಬೇಕಿದೆ ಹಗಲಾಗಬೇಕಿದೆ
ಈ ಜಗದ ರಥಕೆ ನೊಗವಾಗಬೇಕಿದೆ
ನಗುವಾಗಬೇಕಿದೆ ಮಗುವಾಗಬೇಕಿದೆ
ಎಲ್ಲವೂ ಜೊತೆ ಜೊತೆಗೆ ಸಾಗಲೇಬೇಕಿದೆ
ಹಸಿರಾಗಬೇಕಿದೆ ಉಸಿರಾಗಬೇಕಿದೆ
ನೆಮ್ಮದಿಯ ನಾಳೆಗೆ ಹೆಸರಾಗಬೇಕಿದೆ
ಬುಧ್ದನಾಗಬೇಕಿದೆ ಬದ್ಧನಾಗಲೇಬೇಕಿದೆ
ಮಾನವತೆಯ ನವ ಧೂತನಾಗಬೇಕಿದೆ
ನಾನಾಗಬೇಕಿದೆ ಬದುಕು
ನಾನಾಗಬೇಕಿದೆ ಬೆಳಕು
ಆಗಬೇಕಿದೆ ಅನಂತ ಚೇತನ
----------------------------------
"ಭಾವಕಣ"
ಇರುವೆಲ್ಲಾ ಇರುಳನ್ನು ಇಡಿಯಾಗಿ ತೊಳೆದು
ಬರುವೆಲ್ಲಾ ಕಷ್ಠಗಳ ಬಿಡದಂತೆ ಬಳಿದು
ಮನುಕುಲದ ಮನದಲ್ಲಿ ಬೆಳಕಂತೆ ಹೊಳೆದು
ಸಿದ್ಧನಾಗಬೇಕಿದೆ ಸನ್ನದ್ಧನಾಗಬೇಕಿದೆ
ಅಪ್ರಭುದ್ಧತೆಯಿಂದ ಪ್ರಭುಧ್ಧನಾಗಬೇಕಿದೆ
ವೃದ್ಧಿಯಾಗಬೇಕಿದೆ ಸಮೃಧ್ಧಿಯಾಗಬೇಕಿದೆ
ಹಸಿದವರ ಹೊಟ್ಟೆಗೆ ಅನ್ನವೀಯಬೇಕಿದೆ
ಅರಿವಾಗಬೇಕಿದೆ ಹರಿವಾಗಬೇಕಿದೆ
ನೊಂದವರಿಗೆ ನೆರಳಾಗಬೇಕಿದೆ
ಗುರುವಾಗಬೇಕಿದೆ ಗುರಿಯಾಗಬೇಕಿದೆ
ನನ್ನವರ ಸಾಧನೆಗೆ ಹಾದಿಯಾಗಬೇಕಿದೆ
ಮಳೆಯಾಗಬೇಕಿದೆ ಬೆಳೆಯಾಗಬೇಕೀದೆ
ಭೂತಾಯಿ ಎಲ್ಲರಿಗೂ ಹಾಲೂಡಬೇಕಿದೆ
ಹೆಗಲಾಗಬೇಕಿದೆ ಹಗಲಾಗಬೇಕಿದೆ
ಈ ಜಗದ ರಥಕೆ ನೊಗವಾಗಬೇಕಿದೆ
ನಗುವಾಗಬೇಕಿದೆ ಮಗುವಾಗಬೇಕಿದೆ
ಎಲ್ಲವೂ ಜೊತೆ ಜೊತೆಗೆ ಸಾಗಲೇಬೇಕಿದೆ
ಹಸಿರಾಗಬೇಕಿದೆ ಉಸಿರಾಗಬೇಕಿದೆ
ನೆಮ್ಮದಿಯ ನಾಳೆಗೆ ಹೆಸರಾಗಬೇಕಿದೆ
ಬುಧ್ದನಾಗಬೇಕಿದೆ ಬದ್ಧನಾಗಲೇಬೇಕಿದೆ
ಮಾನವತೆಯ ನವ ಧೂತನಾಗಬೇಕಿದೆ
ನಾನಾಗಬೇಕಿದೆ ಬದುಕು
ನಾನಾಗಬೇಕಿದೆ ಬೆಳಕು
ಆಗಬೇಕಿದೆ ಅನಂತ ಚೇತನ
----------------------------------
"ಭಾವಕಣ"
No comments:
Post a Comment