ಎಲೆಯ ಮೇಲೆ ಹನಿಯ ಮಾಲೆ ಕೊರಳ ಮುತ್ತಿನಂತೆ
ಹೊಳೆಯುತಿವೆ ಸಾಲನುಟ್ಟು
ನಲ್ಲೆಗೆದೆಯ ಪಾತ್ರೆಯೊಳು ಬೇಯುತಿದೆ ಒಲವಿನೂಟ
ತುತ್ತುಕೊಡುವೆ ಮುತ್ತನಿಟ್ಟು
ಹೊಳೆವ ಅವಳ ಕಣ್ಣುಗಳು ಪ್ರೇಮ ಬಿಂಬ ಮೂಡಿಸಿ
ನನ್ನ ಚಿತ್ರ ಬಿಡಿಸಿದೆ
ಹೆಜ್ಜೆ-ಗೆಜ್ಜೆನಾದ ನುಡಿಸಿ ಒಲವು ಒಡಲನೆ ಮಿಡಿಸಿ
ಭಾವಗೀತೆ ಹಾಡಿದೆ
ಎಲ್ಲಾ ನಿನ್ನದೆ ಮಾಯೆ ನಿನಗೆಂದೋ ಶರಣಾದೆ
ಕಾಣೆ ಅರುಳೊ ಮರುಳೊ
ಏನೊಂದು ನಾನರಿಯೆ ಕನಸಲೂ ಕಾಡಿದೆ ಏಕೆ
ಇದು ಹಗಲೊ-ಇರುಳೊ
ಕಣ್ಣು ಕಟ್ಟಿದ ಕವನ ಪ್ರೀತಿಗೆ ಹಾಡಾಗುತಿದೆ
ಎದೆಬಡಿತ ಸಂಗೀತ
ಪ್ರೀತಿ ಹುಟ್ಟಿದ ಘಳಿಗೆ ಮನದಿ ಒಲವ ಸೋನೆ
ಹನಿಗನಿಯ ಸಂಗಾತ
ಭಾವಬಂಧನ ಎದೆಗೆ ನೀ ಬರದೆ ಬಿಡುಗಡೆಯೆ
ಒಲವು ತೊಡಿಸಿದೆ ಬೇಡಿ
ಅಂದ ಬಣ್ಣಿಸಿ ದಣಿದೆ ಚೆಂದ ಹೊಗಳಲುಬಹುದೆ
ಸೋತ ಚಂದಿರ ನೋಡಿ
----------------------------------------
"ಭಾವಕಣ"
ಹೊಳೆಯುತಿವೆ ಸಾಲನುಟ್ಟು
ನಲ್ಲೆಗೆದೆಯ ಪಾತ್ರೆಯೊಳು ಬೇಯುತಿದೆ ಒಲವಿನೂಟ
ತುತ್ತುಕೊಡುವೆ ಮುತ್ತನಿಟ್ಟು
ಹೊಳೆವ ಅವಳ ಕಣ್ಣುಗಳು ಪ್ರೇಮ ಬಿಂಬ ಮೂಡಿಸಿ
ನನ್ನ ಚಿತ್ರ ಬಿಡಿಸಿದೆ
ಹೆಜ್ಜೆ-ಗೆಜ್ಜೆನಾದ ನುಡಿಸಿ ಒಲವು ಒಡಲನೆ ಮಿಡಿಸಿ
ಭಾವಗೀತೆ ಹಾಡಿದೆ
ಎಲ್ಲಾ ನಿನ್ನದೆ ಮಾಯೆ ನಿನಗೆಂದೋ ಶರಣಾದೆ
ಕಾಣೆ ಅರುಳೊ ಮರುಳೊ
ಏನೊಂದು ನಾನರಿಯೆ ಕನಸಲೂ ಕಾಡಿದೆ ಏಕೆ
ಇದು ಹಗಲೊ-ಇರುಳೊ
ಕಣ್ಣು ಕಟ್ಟಿದ ಕವನ ಪ್ರೀತಿಗೆ ಹಾಡಾಗುತಿದೆ
ಎದೆಬಡಿತ ಸಂಗೀತ
ಪ್ರೀತಿ ಹುಟ್ಟಿದ ಘಳಿಗೆ ಮನದಿ ಒಲವ ಸೋನೆ
ಹನಿಗನಿಯ ಸಂಗಾತ
ಭಾವಬಂಧನ ಎದೆಗೆ ನೀ ಬರದೆ ಬಿಡುಗಡೆಯೆ
ಒಲವು ತೊಡಿಸಿದೆ ಬೇಡಿ
ಅಂದ ಬಣ್ಣಿಸಿ ದಣಿದೆ ಚೆಂದ ಹೊಗಳಲುಬಹುದೆ
ಸೋತ ಚಂದಿರ ನೋಡಿ
----------------------------------------
"ಭಾವಕಣ"
No comments:
Post a Comment