Sunday, 20 July 2014

"ಒಲವ ಸುಧೆ"

ಸುಮ್ಮನಿದ್ದ ಹೃದಯದ ನೆಲದಿ ಪ್ರೀತಿ ಮೊಳೆಸಿದ
ಮಾಯಗಾತಿ ನೀನು
ಕಣ್ಣ ಸಣ್ಣ ನೋಟಕೆ ಕಳೆದುಕೊಂಡ ಹೃದಯವ
ಹುಡುಕಿ ಸೋತೆ ನಾನು

ಕೆನ್ನೆ ಮದ್ದು ಕಿರುನಗೆ ಬಿಡದೆ ಸೂರೆಗೊಂಡಿದೆ
ಎದೆಯ ಪ್ರೀತಿ ನಿಧಿಯ
ಚಲನೆ ಮರೆತು ನಿಂತೆನು ಮೌನಿಯಾಗಿ ಹೋದೆನು
ಸವಿದೊಲವ ಸುಧೆಯ

ಯಾರೊ ಕಾಣೆ ಎದೆಯಲಿ ಇಟ್ಟಂತಿದೆ ಕಚಗುಳಿ
ನಗು ಸುಮ್ಮನೆ ಮೊಗದಲಿ
ನಿನ್ನದೊಂದು ಸನ್ನೆಗೆ ಎದೆಹಾಸುವೆ ಹೆಜ್ಜೆಗೆ
ಮಾತಿರದೀ ಜಗದಲಿ

ಕಣ್ಣು ಹಾಯಿಸಿದಷ್ಠೂ ನಿನ್ನ ರೂಪವೇ ಇತ್ತು
ಆಗಸದಲೂ ನಿನ ಬಿಂಬ
ಹೂಕಂಪಿಗೂ ಈಗ ವಾರೀಸುದಾರಿಕೆ ನಿನದೆ
ಸಿಹಿಜೇನು ಎದೆತುಂಬ

.............................................................
"ಭಾವಕಣ"

No comments:

Post a Comment