ದೇಸ ಬುಡ್ತಾರಂತಲ್ರಪ್ಪೊ
ಕೋಸ ಓದ್ದವ್ರೆಲ್ಲ
ಕಸ್ಟ್ವಂತಿವ್ರುಗೆ ಬದ್ಕಕಿಲ್ಲಿ
ಯಾಸ ತೊಟ್ಟವ್ರೆಲ್ಲ
ಇಲ್ಲಿದನ್ನ ಇಲ್ಲಿಂದ್ಹಣ
ಇಲ್ಲೇ ಜೀವ್ನ ಇವ್ರ್ಗೆ
ತೀರ್ಸಕಾದ್ದೆ ಮಣ್ಣಿನ್ರುಣ
ದೊಡ್ಮಾತೇಕೆ ಅವ್ರ್ಗೆ
ಸಾವ್ರಾರ್ವರ್ಸ ಊರಿಂದಾಚೆ
ನೂಕಿಸ್ಕಂಡ್ರೂನುವೆ
ದೇಸ ಬುಡ ಮಾತೇ ಇಲ್ಲ
ಪಾಪ ಸಹಿಸ್ಕಂಡವೆ
ಜಾತಿ ಹೆಸ್ರಲ್ಜೀವ ತಗ್ದು
ಬೆಂಕಿಲ್ಸುಟ್ರುನೂವೆ
ಸತ್ರೂ ಇಲ್ಲೇ ಸಾಯ್ತೀವರ್ತೂ
ದೇಸ ನಮ್ದಂತವೆ
ಹೆತ್ತವ್ರನ್ನ ಹೆಂಡ್ತಿಮಕುಳ್ನ
ವರ್ಸಂಗಾಲ ನೋಡ್ದೆ
ದೇಸ ಕಾಯ್ತ ಕುಂತವ್ರಲ್ಲ
ಒಂದ್ಮಾತೂ ಆಡ್ದೆ
ದೇಸುಕ್ಬೆನ್ನು ಸತ್ರುಗ್ಯದೆ
ಯೋದ್ರು ಕೊಟ್ಟವ್ರಲ್ಲ
ಯಾವತ್ತಿಗೂ ದೇಸ ಬುಡೊ
ಮಾತೇ ಆಡಕಿಲ್ಲ
ಬ್ಯವುರ್ನೇ ಬಸ್ದು ಬ್ಯಳೆ ತಗ್ದು
ಅನ್ನ ಕೊಡೋ ರೈತ
ಸತ್ರೂ ಮರ್ಯಕಿಲ್ಲ ನಮ್ಮೀ
ಭೂಮಿರುಣುದ್ಮಾತ
ಸಾಲ್ದ ಸೂಲ್ಕೆ ಕುತ್ಗೆ ಕೊಟ್ರು
ಬ್ಯಳಿತವ್ನಲ್ವ ಬ್ಯಳೆ
ನಿಮ್ಮಂತವ್ರ್ಗೆಲ್ಗೊತ್ತಾಗ್ಬೇಕು
ಅನ್ನದಾತ್ನ ಬ್ಯಲೆ
ಭಗತ್ಬೋಸು,ಆಜಾದ್,ಗಾಂಧಿ
ವಿವೇಕ,ಅಂಬೇಡ್ಕರ
ಲಕ್ಷ್ಮಿ ಭಾಯೀ,ಫುಲೆ,ಪಾಂಡೆ
ರಾಯಣ್ಣ,ಚನ್ನಮ್ನೋರ
ಮರತ್ಬುಟ್ರೇನ್ರೋ ಮೂಡ್ನನ್ಮಕ್ಳ
ಅವ್ರ ದೇಸ ಪ್ರೇಮ
ಇವಾಗ್ಲಾದ್ರೂ ಭಾರತ್ಮಾತ್ಗೆ
ಅರ್ಪುಸ್ಕಳಿ ಜನ್ಮ
ಹೆಣ್ಣಿನ್ಮಾನ ಪ್ರಾಣ ತಗ್ದು
ಬದುಕ್ನೇ ಈರಿದ್ರೂನು
ಸಹಿಸ್ಕಂಡವೆ ನಮ್ಕೂಸ್ಗಳು
ದಿನಾ ನೋವುಂಡ್ರೂನು
ಬಡ್ತಾನಾನೇ ಬೆನ್ಗೆ ಕಟ್ಕಂಡು
ಹಸ್ದ ವಟ್ಟೇಲಿದ್ರೂ
ಯದೆ ತಟ್ಕಂದ್ಹೇಳ್ತೀವ್ನಾವು
ಭಾರ್ತ ನಮ್ದು ಇದ್ರೂ-ಸತ್ರೂ
ಭಾರ್ತ ಅಂದ್ರೆ ಕಲ್ಮಣ್ಣು ತುಂಬ್ಕಂಡ
ಬ಼ರ್ಡು ಬೂಮ್ಯಲ್ಲ
ಭಾರ್ತ ಅಂದ್ರೆ ಅವ್ವ,ಭಾರ್ತ ಅಂದ್ರೆ ಜೀವ
ಭಾರ್ತ ಅಂದ್ರೆ ನಾವೆಲ್ಲ
ಭಾರ್ತ ಅಂದ್ರೆ ಬದ್ಕು,ಭಾರ್ತ ಅಂದ್ರೆ ದ್ಯಾವ್ರು
ಭಾರ್ತ ಅಂದ್ರೆ ಉಸ್ರು
ಭಾರ್ತ ಅಂದ್ರೆ ಬ್ಯಳ್ಕು,ಭಾರ್ತ ಅಂದ್ರೆ ಒಡ್ಲು
ಮಮ್ತೆ ತುಂಬಿದ್ಮಡ್ಲು
--------------------------------------------
" ಭಾವಕಣ"
ಕೋಸ ಓದ್ದವ್ರೆಲ್ಲ
ಕಸ್ಟ್ವಂತಿವ್ರುಗೆ ಬದ್ಕಕಿಲ್ಲಿ
ಯಾಸ ತೊಟ್ಟವ್ರೆಲ್ಲ
ಇಲ್ಲಿದನ್ನ ಇಲ್ಲಿಂದ್ಹಣ
ಇಲ್ಲೇ ಜೀವ್ನ ಇವ್ರ್ಗೆ
ತೀರ್ಸಕಾದ್ದೆ ಮಣ್ಣಿನ್ರುಣ
ದೊಡ್ಮಾತೇಕೆ ಅವ್ರ್ಗೆ
ಸಾವ್ರಾರ್ವರ್ಸ ಊರಿಂದಾಚೆ
ನೂಕಿಸ್ಕಂಡ್ರೂನುವೆ
ದೇಸ ಬುಡ ಮಾತೇ ಇಲ್ಲ
ಪಾಪ ಸಹಿಸ್ಕಂಡವೆ
ಜಾತಿ ಹೆಸ್ರಲ್ಜೀವ ತಗ್ದು
ಬೆಂಕಿಲ್ಸುಟ್ರುನೂವೆ
ಸತ್ರೂ ಇಲ್ಲೇ ಸಾಯ್ತೀವರ್ತೂ
ದೇಸ ನಮ್ದಂತವೆ
ಹೆತ್ತವ್ರನ್ನ ಹೆಂಡ್ತಿಮಕುಳ್ನ
ವರ್ಸಂಗಾಲ ನೋಡ್ದೆ
ದೇಸ ಕಾಯ್ತ ಕುಂತವ್ರಲ್ಲ
ಒಂದ್ಮಾತೂ ಆಡ್ದೆ
ದೇಸುಕ್ಬೆನ್ನು ಸತ್ರುಗ್ಯದೆ
ಯೋದ್ರು ಕೊಟ್ಟವ್ರಲ್ಲ
ಯಾವತ್ತಿಗೂ ದೇಸ ಬುಡೊ
ಮಾತೇ ಆಡಕಿಲ್ಲ
ಬ್ಯವುರ್ನೇ ಬಸ್ದು ಬ್ಯಳೆ ತಗ್ದು
ಅನ್ನ ಕೊಡೋ ರೈತ
ಸತ್ರೂ ಮರ್ಯಕಿಲ್ಲ ನಮ್ಮೀ
ಭೂಮಿರುಣುದ್ಮಾತ
ಸಾಲ್ದ ಸೂಲ್ಕೆ ಕುತ್ಗೆ ಕೊಟ್ರು
ಬ್ಯಳಿತವ್ನಲ್ವ ಬ್ಯಳೆ
ನಿಮ್ಮಂತವ್ರ್ಗೆಲ್ಗೊತ್ತಾಗ್ಬೇಕು
ಅನ್ನದಾತ್ನ ಬ್ಯಲೆ
ಭಗತ್ಬೋಸು,ಆಜಾದ್,ಗಾಂಧಿ
ವಿವೇಕ,ಅಂಬೇಡ್ಕರ
ಲಕ್ಷ್ಮಿ ಭಾಯೀ,ಫುಲೆ,ಪಾಂಡೆ
ರಾಯಣ್ಣ,ಚನ್ನಮ್ನೋರ
ಮರತ್ಬುಟ್ರೇನ್ರೋ ಮೂಡ್ನನ್ಮಕ್ಳ
ಅವ್ರ ದೇಸ ಪ್ರೇಮ
ಇವಾಗ್ಲಾದ್ರೂ ಭಾರತ್ಮಾತ್ಗೆ
ಅರ್ಪುಸ್ಕಳಿ ಜನ್ಮ
ಹೆಣ್ಣಿನ್ಮಾನ ಪ್ರಾಣ ತಗ್ದು
ಬದುಕ್ನೇ ಈರಿದ್ರೂನು
ಸಹಿಸ್ಕಂಡವೆ ನಮ್ಕೂಸ್ಗಳು
ದಿನಾ ನೋವುಂಡ್ರೂನು
ಬಡ್ತಾನಾನೇ ಬೆನ್ಗೆ ಕಟ್ಕಂಡು
ಹಸ್ದ ವಟ್ಟೇಲಿದ್ರೂ
ಯದೆ ತಟ್ಕಂದ್ಹೇಳ್ತೀವ್ನಾವು
ಭಾರ್ತ ನಮ್ದು ಇದ್ರೂ-ಸತ್ರೂ
ಭಾರ್ತ ಅಂದ್ರೆ ಕಲ್ಮಣ್ಣು ತುಂಬ್ಕಂಡ
ಬ಼ರ್ಡು ಬೂಮ್ಯಲ್ಲ
ಭಾರ್ತ ಅಂದ್ರೆ ಅವ್ವ,ಭಾರ್ತ ಅಂದ್ರೆ ಜೀವ
ಭಾರ್ತ ಅಂದ್ರೆ ನಾವೆಲ್ಲ
ಭಾರ್ತ ಅಂದ್ರೆ ಬದ್ಕು,ಭಾರ್ತ ಅಂದ್ರೆ ದ್ಯಾವ್ರು
ಭಾರ್ತ ಅಂದ್ರೆ ಉಸ್ರು
ಭಾರ್ತ ಅಂದ್ರೆ ಬ್ಯಳ್ಕು,ಭಾರ್ತ ಅಂದ್ರೆ ಒಡ್ಲು
ಮಮ್ತೆ ತುಂಬಿದ್ಮಡ್ಲು
--------------------------------------------
" ಭಾವಕಣ"
No comments:
Post a Comment