ನನ್ನ ನಿದಿರೆಯ ಕದಿವ
ನಿನ್ನ ನೆನಪುಗಳಿಗೇನು
ಬೇರೆ ಕೆಲಸವಿಲ್ಲವೆ ಕೇಳು?
ನನ್ನನ್ನೇ ನಾ ಮರೆತು
ವರುಷಗಳೇ ಕಳೆದಿವೆ
ಕಣ್ಣೋಟಕೆ ಸೋತದ್ದೇ ಮೊದಲ ಸೋಲು
ಎಲ್ಲೆಂದರಲ್ಲಲ್ಲಿ ನಿನ ಗೆಜ್ಜೆಸದ್ದಲ್ಲಿ
ಎದೆ ತಾಳ ತಪ್ಪಿ ಹೋಯ್ತಲ್ಲ
ಮುಂದೇನದರ ಪಾಡು?
ಗುನುಗುತಿದೆ ನಿನ ಹಾಡು
ನನ್ನೆದೆಗೇ ನನ್ನ ನೆನಪಿಲ್ಲ!
ಸುಖಾಸುಮ್ಮನೆ ನಗುವ
ನಾನೆಂಥ ಮರುಳಿನವ
ನೀನಾದರೂ ಹೇಳು ಇದಕೆ ಮದ್ದು!
ನಾನಂತೂ ನಾನಲ್ಲ
ನಾನಾಗಿ ಉಳಿದಿಲ್ಲ
ಗುಂಗಿಡಿಸಿದೆ ಕೈ ಬಳೆಯ ಸದ್ದು!
ಏನಿದೆಯೋ ನಗುವಲ್ಲಿ
ಸೆಳೆವಂತ ಮಾಂತ್ರಿಕತೆ
ಪರವಶವು ನಾನಲ್ಲಿ ನಿನ್ನಲ್ಲೆ!
ಮರಳಿ ಕರೆಯದಿರು ನನ್ನ
ಈ ದಿವ್ಯ ವಶದಿಂದ
ಎಂಥ ಹಿತವಿದೆ ನಿನ್ನ ಮಾತಲ್ಲೆ
ಪ್ರೀತಿ ಎಂದರೆ ಹೀಗೆ
ಹೂವು ಅರಳುವ ಹಾಗೆ
ಕಲ್ಲನ್ನೂ ಕರಗಿಸುವ ನವ್ಯಭಾವ
ಒಲವ ಒಲವಲಿ ಬೆರೆಸಿ
ಒಡಲ ಒಡಲಲಿ ಮಿಡಿಸಿ
ಕೊನೆವರೆಗೂ ಕಾಯ್ವ ಸತ್ಯ ದೈವ
------------- ------------- -------------
" ಭಾವಕಣ "
ನಿನ್ನ ನೆನಪುಗಳಿಗೇನು
ಬೇರೆ ಕೆಲಸವಿಲ್ಲವೆ ಕೇಳು?
ನನ್ನನ್ನೇ ನಾ ಮರೆತು
ವರುಷಗಳೇ ಕಳೆದಿವೆ
ಕಣ್ಣೋಟಕೆ ಸೋತದ್ದೇ ಮೊದಲ ಸೋಲು
ಎಲ್ಲೆಂದರಲ್ಲಲ್ಲಿ ನಿನ ಗೆಜ್ಜೆಸದ್ದಲ್ಲಿ
ಎದೆ ತಾಳ ತಪ್ಪಿ ಹೋಯ್ತಲ್ಲ
ಮುಂದೇನದರ ಪಾಡು?
ಗುನುಗುತಿದೆ ನಿನ ಹಾಡು
ನನ್ನೆದೆಗೇ ನನ್ನ ನೆನಪಿಲ್ಲ!
ಸುಖಾಸುಮ್ಮನೆ ನಗುವ
ನಾನೆಂಥ ಮರುಳಿನವ
ನೀನಾದರೂ ಹೇಳು ಇದಕೆ ಮದ್ದು!
ನಾನಂತೂ ನಾನಲ್ಲ
ನಾನಾಗಿ ಉಳಿದಿಲ್ಲ
ಗುಂಗಿಡಿಸಿದೆ ಕೈ ಬಳೆಯ ಸದ್ದು!
ಏನಿದೆಯೋ ನಗುವಲ್ಲಿ
ಸೆಳೆವಂತ ಮಾಂತ್ರಿಕತೆ
ಪರವಶವು ನಾನಲ್ಲಿ ನಿನ್ನಲ್ಲೆ!
ಮರಳಿ ಕರೆಯದಿರು ನನ್ನ
ಈ ದಿವ್ಯ ವಶದಿಂದ
ಎಂಥ ಹಿತವಿದೆ ನಿನ್ನ ಮಾತಲ್ಲೆ
ಪ್ರೀತಿ ಎಂದರೆ ಹೀಗೆ
ಹೂವು ಅರಳುವ ಹಾಗೆ
ಕಲ್ಲನ್ನೂ ಕರಗಿಸುವ ನವ್ಯಭಾವ
ಒಲವ ಒಲವಲಿ ಬೆರೆಸಿ
ಒಡಲ ಒಡಲಲಿ ಮಿಡಿಸಿ
ಕೊನೆವರೆಗೂ ಕಾಯ್ವ ಸತ್ಯ ದೈವ
------------- ------------- -------------
" ಭಾವಕಣ "
No comments:
Post a Comment