ನಲ್ಲೆ ನೆನ್ನೆ ಬರೆದ ಕವಿತೆ ಹೇಳುವೆ ನಿನಗೆ
ಒಲ್ಲೆ ಎನ್ನದೆ ಕೇಳು
ಮುದ್ದು ಚಂದ್ರನು ನಿನ್ನ ಚೆಲುವಿಗೆ ಕರುಬಿದ
ಅವನದ್ದೆಂಥ ಗೋಳು
ಸಾಗರದಲೆಗಳಿಗೆ ನಿನ್ನ ಮಂತ್ರದ ಕೈ ಸೋಕಿ
ಜೀವ ಬಂದಿದೆ ನೋಡು
ನಿನ್ನ ಧನಿಯನ್ನೇ ಹೋಲುತ್ತಿದೆ ತಾನೆ
ಕೋಗಿಲೆ ಹಾಡುವ ಹಾಡು
ನಿನ್ನ ಮುಡಿಗೇರಲು ಹೂಗಳಲೇ ಪೈಪೋಟಿ
ಆಯ್ಕೆ ನಿನ್ನದೇ ಈಗ
ಕಾವ್ಯಕ್ಕೂ ಸಿಗದ ಆ ನಿನ್ನ ನಗುವಿನ
ಗುಟ್ಟೇನು ಹೇಳು ಬೇಗ
ಕಾಮನಬಿಲ್ಲಿಗೆ ಬಣ್ಣ ನೀನೆ ಕೊಟ್ಟೆಯಂತೆ
ಅಬ್ಬಾ!ಎಂಥ ಬೆರಗು
ಸುರಿವ ಮಳೆಹನಿಗಳಿಗೆ ನೀನೆ ಒಡತಿಯಂತೆ
ಚೆಂದ ಮಳೆಯ ಸೊಬಗು
-------------------------------------------------------------------
"ಭಾವಕಣ"
ಒಲ್ಲೆ ಎನ್ನದೆ ಕೇಳು
ಮುದ್ದು ಚಂದ್ರನು ನಿನ್ನ ಚೆಲುವಿಗೆ ಕರುಬಿದ
ಅವನದ್ದೆಂಥ ಗೋಳು
ಸಾಗರದಲೆಗಳಿಗೆ ನಿನ್ನ ಮಂತ್ರದ ಕೈ ಸೋಕಿ
ಜೀವ ಬಂದಿದೆ ನೋಡು
ನಿನ್ನ ಧನಿಯನ್ನೇ ಹೋಲುತ್ತಿದೆ ತಾನೆ
ಕೋಗಿಲೆ ಹಾಡುವ ಹಾಡು
ನಿನ್ನ ಮುಡಿಗೇರಲು ಹೂಗಳಲೇ ಪೈಪೋಟಿ
ಆಯ್ಕೆ ನಿನ್ನದೇ ಈಗ
ಕಾವ್ಯಕ್ಕೂ ಸಿಗದ ಆ ನಿನ್ನ ನಗುವಿನ
ಗುಟ್ಟೇನು ಹೇಳು ಬೇಗ
ಕಾಮನಬಿಲ್ಲಿಗೆ ಬಣ್ಣ ನೀನೆ ಕೊಟ್ಟೆಯಂತೆ
ಅಬ್ಬಾ!ಎಂಥ ಬೆರಗು
ಸುರಿವ ಮಳೆಹನಿಗಳಿಗೆ ನೀನೆ ಒಡತಿಯಂತೆ
ಚೆಂದ ಮಳೆಯ ಸೊಬಗು
-------------------------------------------------------------------
"ಭಾವಕಣ"
No comments:
Post a Comment