ನಿಮಗೆಲ್ಲಾ ಬೇಕು ತಾನೆ ಪ್ರತ್ಯೇಕ ರಾಜ್ಯ?
ಅಂದು ಒಂದಾಗಿಸಲು ಒಂದಾಗಿದ್ದಿರಿ
ಇಂದು ಹೋಳಾಗಿಸಲು ಒಂದಾಗಿದ್ದೀರಿ
ಬನ್ನಿ!ಹರಿತವಾದ ಆಯುಧಗಳನ್ನೇ ತನ್ನಿ
ಕನ್ನಡದ ಕದಂಬ ವೃಕ್ಷವು
ಸಾವಿರಾರು ವರುಷಗಳಷ್ಠು ಹಳೆಯದು
ರಾಜರು,ಸಂತರು,ಕಲಿಗಳು,ಕವಿಗಳು
ಕನ್ನಡಿಗರು ಬಿತ್ತಿದ ಬೆಳೆಯಿದು
ತುಂಡರಿಸಿ ರೆಂಬೆ-ಕೊಂಬೆಗಳ
ಎರಡಾಗಿಸಿ ಒಂದು ಮನಸುಗಳ
ಇಬ್ಭಾಗವಾಗಲಿ ಕನ್ನಡ
ಕದಂಬರ ಕನಸುಗಳನು
ಕಾರ್ಗತ್ತಲೆಯೊಳು ಸರಿಸಿ
ಹೊಯ್ಸಳರ ಶಿಲ್ಪಗಳ ನುಚ್ಚುನೂರಾಗಿಸಿ
ರಾಷ್ಠ್ರಕೂಟರ ಕೂಟವನು
ದೂಳೀಪಟ ಮಾಡಿಬಿಡಿ
ಚಾಲುಕ್ಯರ ಚೈತನ್ಯವ
ಸೆರೆಮನೆಯೊಳು ನೂಕಿಬಿಡಿ
ಗಂಗರ ಹಂಗದು ಏಕೆ ?
ವಿಜಯನಗರದ್ವೈಭವವೇಕೆ?
ಒಡೆಯರ ನುಡಿಗುಡಿಯ
ಮೈಸೂರಿನ ಮಮತೆಯೇಕೆ?
ಚಿತೆಗೇರಿಸಿ ಕನ್ನಡದ ಚೈತನ್ಯಗಳ
ಗಲ್ಲಿಗೇರಿಸಿ ಕನ್ನಡದ ಕಟ್ಟಾಳುಗಳ
ಒಡೆದುಬಿಡಿ ಕನ್ನಡವ ಉತ್ತರ ದಕ್ಷಿಣವೆಂದು
ತುಂಡುಮಾಡಿ ಚೆಲ್ಲಿಬಿಡಿ ಕನ್ನಡದಖಂಡವನು
ಹೋಳಾಗಲಿ ಭುವನೇಶ್ವರಿಯ
ಕನ್ನಡ ಸಿರಿಗುಡಿಯು
ಮಣ್ಣಾಗಲಿ ನಮ್ಹೆಮ್ಮೆಯ ಸವಿಗನ್ನಡ ನುಡಿಯು
ಕಡಿದುಬಿಡಿ ಕನ್ನಡಮ್ಮನೆದೆಗಳ
ನಿಮಗೊಂದು ನಮಗೊಂದು
ಆಗಿಬಿಡಲಿ ಅವಳೀಗ ದೇಹವೊಂದು ಉಸಿರೊಂದು
ನಿಮಗೆಲ್ಲಾ ಬೇಕು ತಾನೆ ಪ್ರತ್ಯೇಕ ರಾಜ್ಯ ???
ಬನ್ನಿ!ಹರಿತವಾದ ಆಯುಧಗಳನ್ನೇ ತನ್ನಿ...
-------------------------------------------------------------------
"ಭಾವಕಣ"
ಅಂದು ಒಂದಾಗಿಸಲು ಒಂದಾಗಿದ್ದಿರಿ
ಇಂದು ಹೋಳಾಗಿಸಲು ಒಂದಾಗಿದ್ದೀರಿ
ಬನ್ನಿ!ಹರಿತವಾದ ಆಯುಧಗಳನ್ನೇ ತನ್ನಿ
ಕನ್ನಡದ ಕದಂಬ ವೃಕ್ಷವು
ಸಾವಿರಾರು ವರುಷಗಳಷ್ಠು ಹಳೆಯದು
ರಾಜರು,ಸಂತರು,ಕಲಿಗಳು,ಕವಿಗಳು
ಕನ್ನಡಿಗರು ಬಿತ್ತಿದ ಬೆಳೆಯಿದು
ತುಂಡರಿಸಿ ರೆಂಬೆ-ಕೊಂಬೆಗಳ
ಎರಡಾಗಿಸಿ ಒಂದು ಮನಸುಗಳ
ಇಬ್ಭಾಗವಾಗಲಿ ಕನ್ನಡ
ಕದಂಬರ ಕನಸುಗಳನು
ಕಾರ್ಗತ್ತಲೆಯೊಳು ಸರಿಸಿ
ಹೊಯ್ಸಳರ ಶಿಲ್ಪಗಳ ನುಚ್ಚುನೂರಾಗಿಸಿ
ರಾಷ್ಠ್ರಕೂಟರ ಕೂಟವನು
ದೂಳೀಪಟ ಮಾಡಿಬಿಡಿ
ಚಾಲುಕ್ಯರ ಚೈತನ್ಯವ
ಸೆರೆಮನೆಯೊಳು ನೂಕಿಬಿಡಿ
ಗಂಗರ ಹಂಗದು ಏಕೆ ?
ವಿಜಯನಗರದ್ವೈಭವವೇಕೆ?
ಒಡೆಯರ ನುಡಿಗುಡಿಯ
ಮೈಸೂರಿನ ಮಮತೆಯೇಕೆ?
ಚಿತೆಗೇರಿಸಿ ಕನ್ನಡದ ಚೈತನ್ಯಗಳ
ಗಲ್ಲಿಗೇರಿಸಿ ಕನ್ನಡದ ಕಟ್ಟಾಳುಗಳ
ಒಡೆದುಬಿಡಿ ಕನ್ನಡವ ಉತ್ತರ ದಕ್ಷಿಣವೆಂದು
ತುಂಡುಮಾಡಿ ಚೆಲ್ಲಿಬಿಡಿ ಕನ್ನಡದಖಂಡವನು
ಹೋಳಾಗಲಿ ಭುವನೇಶ್ವರಿಯ
ಕನ್ನಡ ಸಿರಿಗುಡಿಯು
ಮಣ್ಣಾಗಲಿ ನಮ್ಹೆಮ್ಮೆಯ ಸವಿಗನ್ನಡ ನುಡಿಯು
ಕಡಿದುಬಿಡಿ ಕನ್ನಡಮ್ಮನೆದೆಗಳ
ನಿಮಗೊಂದು ನಮಗೊಂದು
ಆಗಿಬಿಡಲಿ ಅವಳೀಗ ದೇಹವೊಂದು ಉಸಿರೊಂದು
ನಿಮಗೆಲ್ಲಾ ಬೇಕು ತಾನೆ ಪ್ರತ್ಯೇಕ ರಾಜ್ಯ ???
ಬನ್ನಿ!ಹರಿತವಾದ ಆಯುಧಗಳನ್ನೇ ತನ್ನಿ...
-------------------------------------------------------------------
"ಭಾವಕಣ"
No comments:
Post a Comment